ಗುರುವಾರ, ಏಪ್ರಿಲ್ 7, 2011

ಅಣ್ಣಾ ಹಜಾರೆ ಹಾಗೂ ಬ್ರಷ್ಟಾಚಾರ

ಭಾರತೀಯರೇ ಮತ್ತೇ ನಿಮಗೆ ವಿವೇಕಾನಂದರಂತೆ 'ಏಳಿ ಎದ್ದೇಳಿ ...." ಅಂಥಾ ಕರೆ ಕೊಡಬೇಕಾ? ಇನ್ನೂ ಏನೂ ವಿಚಾರ ಮಾಡ್ತಾ ಇದ್ದೀರಾ? ಅಣ್ಣಾ ಹಜಾರೆಯವರು ಬ್ರಷ್ಟಚಾರದ ವಿರುದ್ಧ ಸಿಡಿದೆದ್ದಿದ್ದಾರೆ. ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅವರೇನು ಅವರ ಬೇಳೆ ಬೇಯಿಸಿಕೊಳ್ಳಲು ಮಾಡುತ್ತಾ ಇರುವ ಸತ್ಯಾಗ್ರಹ ಇದಲ್ಲ. ದಯಮಾಡಿ ನಿಮ್ಮ ಎಲ್ಲ ಕೆಲಸ ಬದಿಗೊತ್ತಿ ಅವರ ಸತ್ಯಾಗ್ರಹ ಬೆಂಬಲಿಸಿ. ಆನ್ಲೈನ್ ಮತವಾದರು ಚಲಾಯಿಸಿ ಬೆಂಬಲಿಸಿ. ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಿರಿ. ಇಗಲ್ಲದಿದ್ದರೆ ಇನ್ನೆಂದು ಸಾಧ್ಯವಾಗದು ಎನ್ನುವದನ್ನು ಮರೆಯಬೇಡಿ. ಭಾರತ ಬ್ರಷ್ಟಾಚಾರ ರಹಿತ ದೇಶವಾಗಲಿ. ಇದೇ ನಮ್ಮೆಲ್ಲರ ಆಶಯ ಆಗಿರಲಿ ಹಾಗೂ ಮುಂದಿನ ಪೀಳಿಗೆಗೆ ನಮ್ಮ ದಾರಿದೀಪವಾಗಲಿ. ಜೈ ಭಾರತ ...ಜೈ ಇಂಡಿಯಾ ...ಜೈ ಹಿಂದುಸ್ತಾನ್...

ಸೋಮವಾರ, ಫೆಬ್ರವರಿ 14, 2011

ಹಿಂದೆ, ಇಂದು ...ಮುಂದೆ .....

ಅಲ್ಲಾ, ನನಗೆ ಇಂದು ಒಂದು ಸಂಶಯ ಬರುತ್ತಾ ಇದೆ. ನಮ್ಮ ಪೂರ್ವಜರು ಒಂದೇ ಬಹಳ ಬುದ್ದಿವಂಥರಾಗಿದ್ದರಾ ಇಲ್ಲಾ ಬಹಳ ದಡ್ದರಾ? ನನಗೆ ಸಂಶಯ ಯಾಕೆ ಬರ್ತಾ ಇದೆ ಅಂತಾನ? ನೋಡಿ ರಾಮಾಯಣ , ಮಹಾಭಾರತದಂಥ ಪುಣ್ಯ ಕಥೆಗಳನ್ನ ರಚಿಸಿಬಿಟ್ಟಿದ್ದಾರೆ. ಸುಮ್ಮನೆ ಕಥೆಗಳು ಅಲ್ಲಾ. ಎಷ್ಟೊಂದು ಉಪಕಥೆ. ಕಥೆಗಳಲ್ಲಿ ಕೆಲವು ಸಂಗತಿಗಳು ಆಗಿನ ಕಾಲದಲ್ಲಿ ಕಲ್ಪನೆ ಆಗಿದ್ದವಾ ಇಲ್ಲ ನಿಜವಾಗಿಯೂ ಇದ್ದವಾ ಅಂಥಾ?
ರಾಮಾಯಣದಲ್ಲಿ ಪುಷ್ಪಕ ವಿಮಾನ. ಅಂದು ಕಲ್ಪನೆ ಆಗಿದ್ದರೆ ಇಂದು ಅದು ಸತ್ಯ. ಅಂದು ಸತ್ಯವೇ ಆಗಿದ್ದರೆ ನಾವು ಈಗ ವಿಮಾನ ನೋಡುವದು ಅದೇನು ದೊಡ್ಡ ಸಂಗತಿ ಅನ್ನಿಸುವದಿಲ್ಲ. ನಾವೇ ಪೂರ್ವಜರಿಗಿಂತ ಕಡಿಮೆ ಬುದ್ದಿಯವರು ಅಂದುಕೊಂಡರೆ ತಪ್ಪೇನಿಲ್ಲಾ. ಅಂದು ಅವರು ಸಂಜೀವನಿ ಸಸ್ಯದ ಬಗ್ಗೆ ಬರೆದಿದ್ದಾರೆ. ಇಂದು ವಿಜ್ಞಾನಿಗಳು ಅದರ ಬಗ್ಗೆ ಸಂಶೋಧನೆ ನಡೆಸುತ್ತಾ ಇದ್ದಾರೆ. ಅಂತರ್ಜಾಲದಲ್ಲಿ ವಿಕಿಪೀಡಿಯದಲ್ಲಿ ಸಂಜೀವನಿ ಅಂತ ಬರೆದು ಹುಡುಕಿದರೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ.
ಮಹಾಭಾರತದಲ್ಲಿ ಬ್ರಮ್ಹಾಸ್ತ್ರದ ಬಗ್ಗೆ ಉಲ್ಲೇಕಿಸಲಾಗಿದೆ. ಅದರ ವರ್ಣನೆ ಮಾಡುತ್ತಾ ...ಬ್ರಹ್ಮಾಸ್ತ್ರ ಪ್ರಯೋಗದಿಂದ ಸಂಪೂರ್ಣ ನಾಶವಾಗುವದು ...ಬಹಳ ವರ್ಷಗಳವರೆಗೆ ಅಲ್ಲಿ ಯಾವ ಜೀವಿಗಳು ಬದುಕಲಾರವು ...ಅಂತ ಓದಿದ ನೆನಪು. ಅಂದರೆ ಇಂದಿನ ಆಟೋಮ್ ಬಾಂಬ್ ಅಂಥಾ ವಿಶ್ಲೆಸಿಸಬಹುದಾ? ಹೌದಾದರೆ ಹೌದು, ಇಲ್ಲವಾದರೆ ಇಲ್ಲಾ.
ಇದೇ ಮಹಾಭಾರತದಲ್ಲಿ ಸಂಜಯನು ಧ್ರತರಾಷ್ಟ್ರನಿಗೆ ಅರಮನೆಯಲ್ಲೇ ಕುಳಿತು ಯುದ್ದ ಭೂಮಿಯ ಸಮಾಚಾರಗಳನ್ನು ಲೈವ್ ಕಮೆಂಟರಿ ಕೊಡುತ್ತಾನೆ. ಅಂದರೆ ಅಂತರ್ಜಾಲ ಸೌಲಭ್ಯ ಇತ್ತಾ ಇಲ್ಲಾ ಲೈವ್ ಟಿವಿ ಚಾನೆಲ್ ಇತ್ತಾ?
ಇನ್ನು ಇತ್ತೀಚಿಗೆ ವಿವಾದಕ್ಕೆ ಸಿಲುಕಿರುವ ರಾಮ ಕಟ್ಟಿದ ಸೇತುವೆ... ಅಂದಿನ ಕಥೆಯಲ್ಲಿ ಇದೇ...ಅದೇ ರೀತಿ ಇಂದು ಸಹ ಅದರ ಕುರುಹುಗಳಿವೆ. ಅಂದು ಅವರಿಗೆ ಕುದುರೆ, ಆನೆ ಬಿಟ್ಟರೆ ಬೇರೆ ವಾಹನಗಳು ಇರಲಿಲ್ಲ ಅಂತಾದರೆ ಅವರು ಕಥೆ ಬರೆಯುವಾಗಲಾದರೆ ಇಡೀ ಭಾರತದ ತುಂಬೆಲ್ಲ ಓಡಾಡಿ (ಉತ್ತರ ಭಾರತದ ತುದಿಯಿಂದ ರಾಮೇಶ್ವರ್..ಲಂಕಾ ತುದಿಯವರೆಗೆ) ಅಲ್ಲಲ್ಲಿಯ ನದಿ, ಪರ್ವತ , ಗಿರಿ ಕಂಧರಗಳನ್ನು ಅಭ್ಯಸಿಸಿ ಎಲ್ಲೆಲ್ಲಿ ಅವು ಇವೆಯೋ ಅಲ್ಲಲ್ಲಿಯ ಸ್ಥಳಗಳಿಗೆ ಅನುಗುಣವಾಗಿ ಕಥೆ ಬರೆದಿದ್ದಾರೆ. ಅಬ್ಬಾ ..ಅವರ ಸಾಹಸಕ್ಕೆ ಮೆಚ್ಚಲೇಬೇಕು.
ಇನ್ನು ಗಾಂಧಾರಿಯ ಮಕ್ಕಳು ಮಡಕೆಯಲ್ಲಿ ಹುಟ್ಟಿದರೆ ? ಟೆಸ್ಟ್ ಟ್ಯೂಬ್ ಬೆಬಿಸ್ ...ಮೊದಲೇ ಕಲ್ಪನೆ ಇತ್ತಾ? ಇಲ್ಲಾ ನಿಜವಾಗಲು ರೀತಿ ಸಾಧ್ಯವಾಗುವಂಥಾ ಟೆಕ್ನಾಲಜಿ ಇತ್ತಾ?
ಬರೆಯಲು ಹೋದರೆ ಇನ್ನೂ ಸಾಕಷ್ಟಿದೆ. ಆದರೆ ಇನ್ನೂ ನನಗೆ ಪೂರ್ವಜರು ಇವೆಲ್ಲಾ ಕಲ್ಪಿಸಿದರಾ ಇಲ್ಲಾ ಅವರಲ್ಲಿ ಇಷ್ಟೆಲ್ಲಾ ಬುದ್ದಿಶಕ್ತಿ ಇತ್ತಾ ಅಂಥಾ ಗೋಜಲಾಗುತ್ತಿದೆ. ಯಾರಾದರು ವಿಚಾರವಂಥರು ಇದರ ಮೇಲೆ ಬೆಳಕು ಚೆಲ್ಲಬಲ್ಲಿರಾ? ಪ್ಲೀಸ್...

ಭಾನುವಾರ, ಫೆಬ್ರವರಿ 13, 2011

ಕನ್ನಡದಲ್ಲಿ ಇ-ಪುಸ್ತಕ

ಬಹಳ ದಿನಗಳಿಂದ ಕನ್ನಡದ ಇ-ಪುಸ್ತಕಗಳಿಗಾಗಿ ಅಂತರ್ಜಾಲದಲ್ಲಿ ತಡಕಾದುತ್ತಲೇ ಇದ್ದೇನೆ. ಆದರು ಕನ್ನಡದ ಇ-ಪುಸ್ತಕಗಳು ಸಾಕಷ್ಟು ಸಂಕ್ಯೆಗಳಲ್ಲಿ ಸಿಗುತ್ತಲೇ ಇಲ್ಲ. ನಿಮ್ಮಲ್ಲಿ ಯಾರಿಗಾದರು ತಿಳಿದಿದ್ದರೆ ತಿಳಿಸಿ. ಕನ್ನಡದಲ್ಲಿ ಯಾವ ಕಾರಣಕ್ಕಾಗಿ ಇ-ಪುಸ್ತಕಗಳು ಕಡಿಮೆ ಸಂಖ್ಯೆಯಲ್ಲಿವೆ? ಕನ್ನಡದ ಜಾಣೆ ಜಾಣೆಯರು ಇದರ ಬಗ್ಗೆ ಯಾವ ಕಾರಣಕ್ಕಾಗಿ ಇನ್ನೂ ತಲೆಕೆಡಿಸಿಕೊಂಡಿಲ್ಲ ಅಂಥಾ ಅರ್ಥ ಆಗುತ್ತಿಲ್ಲ.
ಹೊರ ದೇಶ, ಹೊರ ರಾಜ್ಯಗಳಲ್ಲಿ ವಾಸಿಸುವ ಕನ್ನಡಿಗರು ಪುಸ್ತಕ ಓದಲು ಸಹಾಯವಾಗುವಂಥ ಪುಸ್ತಕಗಳಿದ್ದರೆ ಚೆನ್ನ ಅಲ್ಲವೇ? ಪುಸ್ತಕ ಇ- ರೂಪದಲ್ಲಿ ಪ್ರಕಟಿಸಿ ಆನ್ ಲೈನ್ ಓದುವಂತೆ ಮಾಡಿ , ಓದಿದ್ದಕ್ಕೆ ಹಣ ಸಂದಾಯಿಸಿದ್ದನ್ನು , ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಗೌರವಧನ ಸಿಗುವಂತೆ ಮಾಡುವ ಸಾಫ್ಟ್ವೇರ್ ತಜ್ಞರು ನಮ್ಮಲ್ಲಿದಾರೆಯೇ? ದಯಮಾಡಿ ಉತ್ತರಿಸಿ.

ಶನಿವಾರ, ಫೆಬ್ರವರಿ 12, 2011

ನಾನು ಹಾಗೂ ಕನ್ನಡದ ಪುಸ್ತಕ

ಅದೇನೋ ಕನ್ನಡದ ಪುಸ್ತಕ ಕಂಡೊಡನೆ ಮನದಲ್ಲಿ ಆಸೆಬುರುಕುತನ ಬಂದುಬಿಡುತ್ತೆರಿ. ಇದ್ದ ಬಿದ್ದ ಎಲ್ಲಾ ಪುಸ್ತಕ ಕೊಂಡು ತಂದು ಓದಿ ಮುಗಿಸಿಬಿಡೋಣ ಅನ್ನಿಸುತ್ತೆ. ಆದರೆ ಸಮಯದ ಅಭಾವದ ನಡುವೆ ಒಂದು ಪುಸ್ತಕ ಓದಿ ಮುಗಿಸುವದರಲ್ಲಿ ಸಾಕಷ್ಟು ಸಮಯ ಕಳೆದುಹೋಗಿರುತ್ತದೆ. ದೊಡ್ಡ ದೊಡ್ಡ ಲೇಖಕರ ಪುಸ್ತಕ ಅಂದ್ರೆ ಓದಲು ಅದೇನೋ ಖುಷಿ. ಅವರು ನಮ್ಮ ತಾಳ್ಮೆ ಕೆಡಿಸದೆ ಓದಿಸಿಕೊಂಡು ಹೋಗುವಂತೆ ಬರೆಯುತ್ತಾರಲ್ಲ ಅಂಥಾ ಒಂಥರಾ ನೆಮ್ಮದಿ ಮನಸ್ಸಿಗೆ ಓದುವ ಮೊದಲೇ ಇರುತ್ತದೆ.
ನಾನು ಓದಿದ ಪುಸ್ತಕಬಗ್ಗೆ ಬರಯುತ್ತ ಹೋಗೋಣ ಅಂಥಾ ಅಂದುಕೊಂಡಿದ್ದೀನಿ. ಅದರಿಂದ ಕನ್ನಡದ ಓದುಗರಿಗೆ ಪುಸ್ತಕದ ಬಗ್ಗೆ ಸ್ವಲ್ಪವಾದರೂ ಮಾಹಿತಿ ಕೊಟ್ಟು ಅವರನ್ನು ಪುಸ್ತಕ ಕೊಂಡು ಓದುವಂತೆ ಪ್ರೋಥ್ಸಾಹಿಸಬಹುದೇ ಅಂತ ಮನಸ್ಸಿಗೆ ತೋಚಿ ಬಹಳ ಆಸೆಗಳಿಂದ ಬರೆಯಲು ಕುಳಿತಿರುವೆ.
ಅಬ್ಬ! ಕನ್ನಡದಲ್ಲಿ ಬರೆಯಲ್ಪಟ್ಟ ಪುಸ್ತಕಗಳು ಸಕತ್ ಆಗಿವೆ. ಓದಿದಷ್ಟು ಹೊಸತು ವಿಷಯಗಳು ಸಿಗುತ್ತವೆ. ಬನ್ನಿ ಗೆಳೆಯರೇ ಹಾಗೂ ಗೆಳತಿಯರೇ.. ಓದೋಣ ಹಾಗೂ ಓದಿಸೋಣ. ಆದರೆ ಪುಗಸಟ್ಟೆ ಓದುವದು ಬೇಡ....ವರ್ಷಕ್ಕೆ ಸ್ವಲ್ಪ ಹಣವನ್ನಾ ಕನ್ನಡದ ಪುಸ್ತಕಗಳಿಗಾಗಿ ಮೀಸಲಾಗಿಟ್ಟು ಕನ್ನಡದ ಸಾಹಿತ್ಯ ಲೋಕವನ್ನ ಬೆಳೆಸೋಣ. ಕೊಂಡು ಓದುವ ಸಂಸ್ಕ್ರತಿ ಬೆಳೆಸಿಕೊಳ್ಳೋಣ.