ಶನಿವಾರ, ಫೆಬ್ರವರಿ 12, 2011

ನಾನು ಹಾಗೂ ಕನ್ನಡದ ಪುಸ್ತಕ

ಅದೇನೋ ಕನ್ನಡದ ಪುಸ್ತಕ ಕಂಡೊಡನೆ ಮನದಲ್ಲಿ ಆಸೆಬುರುಕುತನ ಬಂದುಬಿಡುತ್ತೆರಿ. ಇದ್ದ ಬಿದ್ದ ಎಲ್ಲಾ ಪುಸ್ತಕ ಕೊಂಡು ತಂದು ಓದಿ ಮುಗಿಸಿಬಿಡೋಣ ಅನ್ನಿಸುತ್ತೆ. ಆದರೆ ಸಮಯದ ಅಭಾವದ ನಡುವೆ ಒಂದು ಪುಸ್ತಕ ಓದಿ ಮುಗಿಸುವದರಲ್ಲಿ ಸಾಕಷ್ಟು ಸಮಯ ಕಳೆದುಹೋಗಿರುತ್ತದೆ. ದೊಡ್ಡ ದೊಡ್ಡ ಲೇಖಕರ ಪುಸ್ತಕ ಅಂದ್ರೆ ಓದಲು ಅದೇನೋ ಖುಷಿ. ಅವರು ನಮ್ಮ ತಾಳ್ಮೆ ಕೆಡಿಸದೆ ಓದಿಸಿಕೊಂಡು ಹೋಗುವಂತೆ ಬರೆಯುತ್ತಾರಲ್ಲ ಅಂಥಾ ಒಂಥರಾ ನೆಮ್ಮದಿ ಮನಸ್ಸಿಗೆ ಓದುವ ಮೊದಲೇ ಇರುತ್ತದೆ.
ನಾನು ಓದಿದ ಪುಸ್ತಕಬಗ್ಗೆ ಬರಯುತ್ತ ಹೋಗೋಣ ಅಂಥಾ ಅಂದುಕೊಂಡಿದ್ದೀನಿ. ಅದರಿಂದ ಕನ್ನಡದ ಓದುಗರಿಗೆ ಪುಸ್ತಕದ ಬಗ್ಗೆ ಸ್ವಲ್ಪವಾದರೂ ಮಾಹಿತಿ ಕೊಟ್ಟು ಅವರನ್ನು ಪುಸ್ತಕ ಕೊಂಡು ಓದುವಂತೆ ಪ್ರೋಥ್ಸಾಹಿಸಬಹುದೇ ಅಂತ ಮನಸ್ಸಿಗೆ ತೋಚಿ ಬಹಳ ಆಸೆಗಳಿಂದ ಬರೆಯಲು ಕುಳಿತಿರುವೆ.
ಅಬ್ಬ! ಕನ್ನಡದಲ್ಲಿ ಬರೆಯಲ್ಪಟ್ಟ ಪುಸ್ತಕಗಳು ಸಕತ್ ಆಗಿವೆ. ಓದಿದಷ್ಟು ಹೊಸತು ವಿಷಯಗಳು ಸಿಗುತ್ತವೆ. ಬನ್ನಿ ಗೆಳೆಯರೇ ಹಾಗೂ ಗೆಳತಿಯರೇ.. ಓದೋಣ ಹಾಗೂ ಓದಿಸೋಣ. ಆದರೆ ಪುಗಸಟ್ಟೆ ಓದುವದು ಬೇಡ....ವರ್ಷಕ್ಕೆ ಸ್ವಲ್ಪ ಹಣವನ್ನಾ ಕನ್ನಡದ ಪುಸ್ತಕಗಳಿಗಾಗಿ ಮೀಸಲಾಗಿಟ್ಟು ಕನ್ನಡದ ಸಾಹಿತ್ಯ ಲೋಕವನ್ನ ಬೆಳೆಸೋಣ. ಕೊಂಡು ಓದುವ ಸಂಸ್ಕ್ರತಿ ಬೆಳೆಸಿಕೊಳ್ಳೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ