ಅಲ್ಲಾ, ನನಗೆ ಇಂದು ಒಂದು ಸಂಶಯ ಬರುತ್ತಾ ಇದೆ. ನಮ್ಮ ಪೂರ್ವಜರು ಒಂದೇ ಬಹಳ ಬುದ್ದಿವಂಥರಾಗಿದ್ದರಾ ಇಲ್ಲಾ ಬಹಳ ದಡ್ದರಾ? ನನಗೆ ಈ ಸಂಶಯ ಯಾಕೆ ಬರ್ತಾ ಇದೆ ಅಂತಾನ? ನೋಡಿ ರಾಮಾಯಣ , ಮಹಾಭಾರತದಂಥ ಪುಣ್ಯ ಕಥೆಗಳನ್ನ ರಚಿಸಿಬಿಟ್ಟಿದ್ದಾರೆ. ಸುಮ್ಮನೆ ಕಥೆಗಳು ಅಲ್ಲಾ. ಎಷ್ಟೊಂದು ಉಪಕಥೆ. ಆ ಕಥೆಗಳಲ್ಲಿ ಕೆಲವು ಸಂಗತಿಗಳು ಆಗಿನ ಕಾಲದಲ್ಲಿ ಕಲ್ಪನೆ ಆಗಿದ್ದವಾ ಇಲ್ಲ ನಿಜವಾಗಿಯೂ ಇದ್ದವಾ ಅಂಥಾ?
ರಾಮಾಯಣದಲ್ಲಿ ಪುಷ್ಪಕ ವಿಮಾನ. ಅಂದು ಕಲ್ಪನೆ ಆಗಿದ್ದರೆ ಇಂದು ಅದು ಸತ್ಯ. ಅಂದು ಸತ್ಯವೇ ಆಗಿದ್ದರೆ ನಾವು ಈಗ ವಿಮಾನ ನೋಡುವದು ಅದೇನು ದೊಡ್ಡ ಸಂಗತಿ ಅನ್ನಿಸುವದಿಲ್ಲ. ನಾವೇ ಪೂರ್ವಜರಿಗಿಂತ ಕಡಿಮೆ ಬುದ್ದಿಯವರು ಅಂದುಕೊಂಡರೆ ತಪ್ಪೇನಿಲ್ಲಾ. ಅಂದು ಅವರು ಸಂಜೀವನಿ ಸಸ್ಯದ ಬಗ್ಗೆ ಬರೆದಿದ್ದಾರೆ. ಇಂದು ವಿಜ್ಞಾನಿಗಳು ಅದರ ಬಗ್ಗೆ ಸಂಶೋಧನೆ ನಡೆಸುತ್ತಾ ಇದ್ದಾರೆ. ಅಂತರ್ಜಾಲದಲ್ಲಿ ವಿಕಿಪೀಡಿಯದಲ್ಲಿ ಸಂಜೀವನಿ ಅಂತ ಬರೆದು ಹುಡುಕಿದರೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ.
ಮಹಾಭಾರತದಲ್ಲಿ ಬ್ರಮ್ಹಾಸ್ತ್ರದ ಬಗ್ಗೆ ಉಲ್ಲೇಕಿಸಲಾಗಿದೆ. ಅದರ ವರ್ಣನೆ ಮಾಡುತ್ತಾ ...ಬ್ರಹ್ಮಾಸ್ತ್ರ ಪ್ರಯೋಗದಿಂದ ಸಂಪೂರ್ಣ ನಾಶವಾಗುವದು ...ಬಹಳ ವರ್ಷಗಳವರೆಗೆ ಅಲ್ಲಿ ಯಾವ ಜೀವಿಗಳು ಬದುಕಲಾರವು ...ಅಂತ ಓದಿದ ನೆನಪು. ಅಂದರೆ ಇಂದಿನ ಆಟೋಮ್ ಬಾಂಬ್ ಅಂಥಾ ವಿಶ್ಲೆಸಿಸಬಹುದಾ? ಹೌದಾದರೆ ಹೌದು, ಇಲ್ಲವಾದರೆ ಇಲ್ಲಾ.
ಇದೇ ಮಹಾಭಾರತದಲ್ಲಿ ಸಂಜಯನು ಧ್ರತರಾಷ್ಟ್ರನಿಗೆ ಅರಮನೆಯಲ್ಲೇ ಕುಳಿತು ಯುದ್ದ ಭೂಮಿಯ ಸಮಾಚಾರಗಳನ್ನು ಲೈವ್ ಕಮೆಂಟರಿ ಕೊಡುತ್ತಾನೆ. ಅಂದರೆ ಅಂತರ್ಜಾಲ ಸೌಲಭ್ಯ ಇತ್ತಾ ಇಲ್ಲಾ ಲೈವ್ ಟಿವಿ ಚಾನೆಲ್ ಇತ್ತಾ?
ಇನ್ನು ಇತ್ತೀಚಿಗೆ ವಿವಾದಕ್ಕೆ ಸಿಲುಕಿರುವ ರಾಮ ಕಟ್ಟಿದ ಸೇತುವೆ... ಅಂದಿನ ಕಥೆಯಲ್ಲಿ ಇದೇ...ಅದೇ ರೀತಿ ಇಂದು ಸಹ ಅದರ ಕುರುಹುಗಳಿವೆ. ಅಂದು ಅವರಿಗೆ ಕುದುರೆ, ಆನೆ ಬಿಟ್ಟರೆ ಬೇರೆ ವಾಹನಗಳು ಇರಲಿಲ್ಲ ಅಂತಾದರೆ ಅವರು ಕಥೆ ಬರೆಯುವಾಗಲಾದರೆ ಇಡೀ ಭಾರತದ ತುಂಬೆಲ್ಲ ಓಡಾಡಿ (ಉತ್ತರ ಭಾರತದ ತುದಿಯಿಂದ ರಾಮೇಶ್ವರ್..ಲಂಕಾ ತುದಿಯವರೆಗೆ) ಅಲ್ಲಲ್ಲಿಯ ನದಿ, ಪರ್ವತ , ಗಿರಿ ಕಂಧರಗಳನ್ನು ಅಭ್ಯಸಿಸಿ ಎಲ್ಲೆಲ್ಲಿ ಅವು ಇವೆಯೋ ಅಲ್ಲಲ್ಲಿಯ ಸ್ಥಳಗಳಿಗೆ ಅನುಗುಣವಾಗಿ ಕಥೆ ಬರೆದಿದ್ದಾರೆ. ಅಬ್ಬಾ ..ಅವರ ಸಾಹಸಕ್ಕೆ ಮೆಚ್ಚಲೇಬೇಕು.
ಇನ್ನು ಗಾಂಧಾರಿಯ ಮಕ್ಕಳು ಮಡಕೆಯಲ್ಲಿ ಹುಟ್ಟಿದರೆ ? ಟೆಸ್ಟ್ ಟ್ಯೂಬ್ ಬೆಬಿಸ್ ...ಮೊದಲೇ ಈ ಕಲ್ಪನೆ ಇತ್ತಾ? ಇಲ್ಲಾ ನಿಜವಾಗಲು ಈ ರೀತಿ ಸಾಧ್ಯವಾಗುವಂಥಾ ಟೆಕ್ನಾಲಜಿ ಇತ್ತಾ?
ಬರೆಯಲು ಹೋದರೆ ಇನ್ನೂ ಸಾಕಷ್ಟಿದೆ. ಆದರೆ ಇನ್ನೂ ನನಗೆ ಪೂರ್ವಜರು ಇವೆಲ್ಲಾ ಕಲ್ಪಿಸಿದರಾ ಇಲ್ಲಾ ಅವರಲ್ಲಿ ಇಷ್ಟೆಲ್ಲಾ ಬುದ್ದಿಶಕ್ತಿ ಇತ್ತಾ ಅಂಥಾ ಗೋಜಲಾಗುತ್ತಿದೆ. ಯಾರಾದರು ವಿಚಾರವಂಥರು ಇದರ ಮೇಲೆ ಬೆಳಕು ಚೆಲ್ಲಬಲ್ಲಿರಾ? ಪ್ಲೀಸ್...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ